ಎಂದಾದರೂ ಭಾರತ ಮುಸ್ಲಿಂ ದೇಶವಾಗಬಹುದೆ?

ಮುಸ್ಲಿಮರು ಜನನ ನಿಯಂತ್ರಣ ಅಳವಡಿಸದೆ, ತಮ್ಮ ಜನಸಂಖ್ಯೆ ಹೆಚ್ಚಿಸುತ್ತಾ ಇದ್ದು – ಒಂದು ದಿನ ಭಾರತ ಮುಸ್ಲಿಂ ದೇಶವಾಗಿ ಮಾರ್ಪಡುವುದು ಎಂದು ಹಲವರು ಭಾವಿಸಿದ್ದಾರೆ. ಆದರೆ ಇದರಲ್ಲಿನ ಸತ್ಯವೆಷ್ಟು?

1. 2011ರ ಸರ್ಕಾರದ ಜನಗಣತಿಯಂತೆ, ಮುಸ್ಲಿಂ ಜನಸಂಖ್ಯಾ ವೃದ್ಧಿ 20 ವರ್ಷಗಳಲ್ಲಿ ಅತಿ ಕಡಿಮೆಯಾಗಿದ್ದು, 1991ರಲ್ಲಿ 32.8%ರಿಂದ 2011ರಲ್ಲಿ 24.6%ಗೆ  ಇಳಿದಿದೆ.

2. ಭಾರತೀಯ ಮುಸ್ಲಿಂ ಮಹಿಳೆಯರ ಫಲವತ್ತತೆ (ಮಕ್ಕಳನ್ನು ಹೆರುವ ಶಕ್ತಿ) 1991 ರಲ್ಲಿ 4.1ರಿಂದ 2011 ರಲ್ಲಿ 3.4ಕ್ಕೆ ಕುಸಿದಿದೆ.

3. ದಶಮಾನವಾರು ಜನಸಂಖ್ಯೆ ಬೆಳವಣಿಗೆ ಪ್ರಮಾಣ ಹಿಂದೂ ಮತ್ತು ಮುಸ್ಲಿಮರಿಬ್ಬರಿಗೂ ಇಳಿದಿದೆ.

 199120012011
ಹಿಂದೂ22.7%19.9%16.7%
ಮುಸ್ಲಿಂ32.8%29.5%24.6%

1951 ರಿಂದ 1961, ಮುಸ್ಲಿಂ ಜನಸಂಖ್ಯೆ ಭಾರತದ ಜನಸಂಖ್ಯಾ ಬೆಳವಣಿಗೆ ಪ್ರಮಾಣಕ್ಕಿಂತ 11%ರಷ್ಟು ಹೆಚ್ಚಿತ್ತು  ಆದರೆ ಅದು 2001 ರಿಂದ 2011 ರಲ್ಲಿ, ಸುಮಾರು 7%ಗೆ ಇಳಿದಿದೆ.

https://www.thehindu.com/news/national/indias-religious-mix-has-been-stable-since-1951-says-pew-center-study/article36596965.ece

NFHS ಅಂಕಿ ಸಂಖ್ಯೆಗಳ ಪ್ರಕಾರ ಮುಸ್ಲಿಮರ ಫಲವತ್ತತೆಯ ಪ್ರಮಾಣದಲ್ಲಿ ಇಳಿಕೆ

ಫಲವತ್ತತೆಯ ಪ್ರಮಾಣ – ಅಂದರೆ ಒಬ್ಬ ಮಹಿಳೆಯ ಜೀವನಮಾನದಲ್ಲಿ ಎಷ್ಟು ಮಕ್ಕಳನ್ನು ಆಕೆ ಹೆರುವಳು – ಇದು 2015-16 ರಲ್ಲಿ ನಡೆಸಿದ 4ನೇ ಮತ್ತು 2019-21 ರಲ್ಲಿನ 5ನೇ ನ್ಯಾಷನಲ್ ಫ್ಯಾಮಿಲಿ ಹೆಲ್ತ್ ಸರ್ವೇ (NFHS) ಪ್ರಕಾರ ಎಲ್ಲಾ ಸಮುದಾಯಗಳಿಗೂ ಇಳಿದಿದೆ. ಮುಸ್ಲಿಂ ಮಹಿಳೆಯರ ಫಲವತ್ತತೆಯ ಪ್ರಮಾಣ 2.62 ರಿಂದ 2.36ಕ್ಕೆ ಸೂಕ್ಷ್ಮವಾಗಿ ಇಳಿದಿದೆ.

ಮುಸ್ಲಿಂ ಫಲವತ್ತತೆಯ ಪ್ರಮಾಣದಲ್ಲಿ ಇಳಿಕೆ ಗಮನೀಯ

https://timesofindia.indiatimes.com/india/total-fertility-rate-down-across-all-communities/articleshow/91407169.cms

2050 ರಲ್ಲಿ, ಮುಸ್ಲಿಮರು ಶೇಕಡ 18.4% ಮತ್ತು ಹಿಂದೂಗಳು 76.7%

PEW ವರದಿಯ ಪ್ರಕಾರ, 2050ರಲ್ಲಿ ಭಾರತದ ಜನಸಂಖ್ಯೆಯಲ್ಲಿ ಮುಸ್ಲಿಮರು 18.4% ಮತ್ತು ಹಿಂದೂಗಳು 76.7%ರಷ್ಟು ಆಗಿರುವರೆಂದು ಅಂದಾಜಿಸಲಾಗಿದೆ.

http://www.pewresearch.org/fact-tank/2015/04/21/by-2050-india-to-have-worlds-largest-populations-of-hindus-and-muslims/ 

ಈ ಮೇಲಿನ ಅಂಕಿ ಅಂಶಗಳ ಪ್ರಕಾರ, ಮುಸ್ಲಿಮರ ಜನನ ಪ್ರಮಾಣ ಇಳಿಯುತ್ತಿದ್ದು, ಹಿಂದೂಗಳ ಸಂಖ್ಯೆಯನ್ನು ಬರುವ 300 ವರ್ಷಗಳಲ್ಲೂ ಮೀರುವ ಸಾಧ್ಯತೆಯಿಲ್ಲ. ಹೀಗಾಗಿ, ಮುಸ್ಲಿಮರು ತಮ್ಮ ಜನನ ಪ್ರಮಾಣದ ಮೇರೆಗೆ ಭಾರತವನ್ನು ಮುಸ್ಲಿಂ ದೇಶವನ್ನಾಗಿ ಮಾಡಲಿದ್ದಾರೆ ಎನ್ನುವುದು ಕೇವಲ ಕಟ್ಟುಕತೆ.